Prayas in Kannada

ಆದೈಕಾಲಂ–ರಕ್ಷಣೆ ಮತ್ತು ಪೋಷಣೆಗೆಬ್ಯಾನ್ಯನ್‍ನಒಂದುಆಶ್ರಯಧಾಮ (Adaikalam)

Women on the streets are rescued, and medical aid provided to them gradually introducing psychological therapy, occupational therapy and vocational training.

‘ಆದೈಕಾಲಂ’ ಮಾನಸಿಕಅಸ್ವಸ್ಥ ಮಹಿಳೆಯರಿಗೆಒಂದು ಸುರಕ್ಷಿತಆಸರೆಒದಗಿಸುವಜೊತೆಗೆಅವರಿಗೆಅಗತ್ಯವಾದಆರೈಕೆ, ವೈದ್ಯಕೀಯಕಾಳಜಿನೀಡುತ್ತಲೇ, ಅವರುಚೇತರಿಸಿಕೊಂಡು, ತಮ್ಮ ಬದುಕಿನಜವಾಬ್ದಾರಿಗಳನ್ನು ಪುನಾಕೈಗೆತ್ತಿಕೊಳ್ಳುವಂತೆಅವರನ್ನು ಸಮರ್ಥರಾಗಿಸುವಒಂದು ಪರಿಸರವನ್ನುಒದಗಿಸುತ್ತದೆ. ಭಾರತದಲ್ಲಿಇನ್ನೂ ಮಾನಸಿಕಅಸ್ವಸ್ಥತೆಯನ್ನುಆರೈಕೆಅಗತ್ಯವಿರುವಒಂದುರೋಗಸ್ಥಿತಿಎಂದು ‘ಗುರುತಿಸುವ’ ಅಗತ್ಯವಿದೆ.ಬ್ಯಾನ್ಯನ್‍ಅದಾಗಲೇಕೆಲವು ಹೆಜ್ಜೆಗಳನ್ನುಇಟ್ಟ ಸಮಯ.ಸಾಮಾಜಿಕವಾಗಿಅಂಚಿಗೆ ಸರಿದಜನರಲ್ಲಿಯೇಅತ್ಯಂತದುರ್ಬಲ ವರ್ಗದಜನರೊಂದಿಗೆಕೆಲಸ ಮಾಡುವ ಸ್ಪಷ್ಟಗುರಿಯಿಟ್ಟುಕೊಂಡು1993ರಲ್ಲಿ ಸಂಸ್ಥೆಯನ್ನುಆರಂಭಿಸಲಾಯಿತು. ಪ್ರಾಯಶಃ ಮಾನಸಿಕಅಸ್ವಸ್ಥತೆಗೆಗುರಿಯಾಗಿ ಮನೆಯಿಲ್ಲದ ಈ ಜನರಿಗೆತಾವೇಕೆ ಸಮಾಜದಿಂದಇಷ್ಟೆಲ್ಲಅವಗಣನೆಗೆಗುರಿಯಾಗಿದ್ದೇವೆ ಎಂಬ ಅರಿವೂಇದ್ದಿರಲಿಕ್ಕಿಲ್ಲ. ಸಂಸ್ಥೆಯನ್ನು ಹುಟ್ಟುಹಾಕಿದಆರಂಭಿಕ ವರ್ಷಗಳ ನಂತರ, ಈ ಕಳೆದೊಂದುದಶಕದಲ್ಲಿ ಸಂಸ್ಥೆಯು ಸೇವಾ ವಿತರಣೆ ಸಂಸ್ಥೆಯಿಂದ ಮಾನಸಿಕಆರೋಗ್ಯಆರೈಕೆಯಲ್ಲಿತಜ್ಞಸಂಸ್ಥೆಯಾಗಿರೂಪುಗೊಳ್ಳುವವರೆಗೆ ಸಾಕಷ್ಟುದೂರ ಬಂದಾಗಿದೆ, ಸಾಕಷ್ಟು ವಿಕಾಸ ಹೊಂದಿದೆ. ಮಾನಸಿಕಅಸ್ವಸ್ಥರಚಿಕಿತ್ಸೆ/ಆರೈಕೆ ಮಾಡುವುದು, ಮಾನಸಿಕಆರೋಗ್ಯಆರೈಕೆಕ್ಷೇತ್ರದಲ್ಲಿ ಸಾಮಥ್ರ್ಯ ನಿರ್ಮಾಣ ಮಾಡುವುದು- ಜನರಿಗೆತರಬೇತಿ ಮತ್ತುಕಾರ್ಯವಿಧಾನದ ಮಾದರಿಗಳನ್ನು [...]

 
Posted in Current Edition Article, Featured, Features, HealthCare, Prayas in Kannada | Tagged , , , | Leave a comment

ಮಾನಸಿಕ ಆರೋಗ್ಯ ಮಸೂದೆ 2011: ಒಂದು ವಿಶ್ಲೇಷಣೆ (Mental Health Bill 2011, an analysis)

ವಿಶ್ಲೇಷಣೆ ಈ ಕರಡು ಮಸೂದೆಯು ಹಲವಾರು ಹೊಸ ವಿಧಿಗಳನ್ನು ಒಳಗೊಂಡಿದೆ. ಬಹಳ ಮುಖ್ಯವಾಗಿ ಮಾನವನ ಘನತೆಯನ್ನು ಎತ್ತಿಹಿಡಿಯಲು ಆಧ್ಯತೆ ನೀಡಿದೆ. ಪೂರ್ವಗ್ರಹ ಪೀಡಿತ ಶಬ್ದವಾದ ‘ಮಾನಸಿಕ ಅಸ್ವಸ್ಥ’ ವನ್ನು ಬದಲಾಯಿಸಿ, ‘ಮಾನಸಿಕ ಕಾಯಿಲೆ ಹೊಂದಿರುವ ವ್ಯಕ್ತಿ’ ಎಂದು ಉಲ್ಲೇಖಿಸಲಾಗಿದ್ದು, ಕಾಯಿಲೆಯನ್ನು ಮನುಷ್ಯನಿಂದ ಪ್ರತ್ಯೇಕಿಸುವ ಕೆಲಸಮಾಡಲಾಗಿದೆ. ಇದರಿಂದ ಒಬ್ಬ ವ್ಯಕ್ತಿಗೆ ‘ಪಟ್ಟ’ ಕಟ್ಟುವುದು ತಪ್ಪುತ್ತದೆ ಮತ್ತು ಈ ಲಕ್ಷಣದಿಂದ ಹೊರಬರಲು ಸಹಾಯವಾಗುತ್ತದೆ. ‘ನಾಮಕರಣಗೊಂಡ ಪ್ರತಿನಿಧಿ’, ‘ಒಡಂಬಡಿಕೆ’, ‘ಬೆಂಬಲಿತ ದಾಖಲಾತಿ’ ಮತ್ತು ‘ಪೂರ್ವ ನಿರ್ದೇಶಿತ’ ಹೀಗೆ ಹಲವಾರು ಹೊಸ ವಿಧಿಗಳನ್ನು [...]

 
Posted in Current Edition Article, Editorial, Featured, HealthCare, Prayas in Kannada | Tagged , , | Leave a comment

ಭಾರತದಲ್ಲಿ ಮಾನಸಿಕ ಆರೋಗ್ಯ: ಕ್ರಮಿಸಬೇಕಾದ ದಾರಿ ಬಹಳ ದೂರವಿದೆ (Mental healthcare in India)

ನಾರ್ವೆಯಲ್ಲಿ ವಾಸಿಸುತ್ತಿದ್ದ ಭಾರತೀಯ ದಂಪತಿ, ಮಗನಿಗೆ ‘ಶಿಸ್ತುಕಲಿಸಲು’ ಹೋಗಿದ್ದಕ್ಕಾಗಿ ಜೈಲುಶಿಕ್ಷೆ ಅನುಭವಿಸಿದ್ದು ಸ್ವದೇಶದಲ್ಲಿ ದೊಡ್ಡ ಸುದ್ದಿ, ಆದರೆ ಈ ಪ್ರಕರಣದ ವ್ಯಾಖ್ಯಾನಗಳು ಬೇಸರವನ್ನುಂಟುಮಾಡುವಂತಹದ್ದು. ಕೆಲವರು ಇದಕ್ಕೆ ಶಿಸ್ತುಕಲಿಸುವಲ್ಲಿನ ಮತ್ತು ಪೋಷಣೆಯಲ್ಲಿನ ‘ಸಾಂಸ್ಕೃತಿಕ ಭಿನ್ನತೆ’ಯೇ ಕಾರಣ ಎಂದು ಬಣ್ಣಿಸಿದರೆ, ಇನ್ನು ಕೆಲವರು ಮಗನು ಶಾಲೆಗೆ ಹೋಗುವ ಬಸ್ಸಿನಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಎಂದಾದರೆ ಪೋಷಕರು ಶಿಕ್ಷಿಸುವ ಬದಲು ತಜ್ಞರ ನೆರವು ಪಡೆಯಬೇಕಾಗಿತ್ತು ಎನ್ನುತ್ತಿದ್ದಾರೆ. ಆದರೆ ಈ ಎರಡನೇ ದೃಷ್ಟಿಕೋನವನ್ನು ಹೊಂದಿರುವ ಜನರು ಬಹಳ ಕಡಿಮೆ. ಚಿಕ್ಕ ಮಗ ಅಥವಾ ಮಗಳು [...]

 
Posted in Current Edition Article, Featured, HealthCare, Prayas in Kannada, Views | Tagged , | Leave a comment

ಸಾಮಾಜಿಕಕಾರ್ಯಕ್ರಮಗಳನ್ನುಕಣ್ಣಿಟ್ಟುಕಾಯುವ ಸ್ತ್ರೀಶಕ್ತಿ ಸಂಘದ ಮಹಿಳೆಯರು (Women in SHGs do social accounting)

wfs_socialaccounting

“ಕಿಚಡಿಗೆಅಷ್ಟೆಲ್ಲ ನೀರು ಹಾಕ್ಬೇಡ, ಸೋನಾದೇವಿ ನೋಡಕ್ಕೆ ಬರ್ತಿದ್ದಾರೆ’’ ಬಿಹಾರದ ನವಾಡಜಿಲ್ಲೆಯ ಭಲೌಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟತಯಾರಿಸುತ್ತಿದ್ದಅಡುಗೆಯವಳಕಿವಿಯಲ್ಲಿಇನ್ನೊಬ್ಬ ಮಹಿಳೆ ಪಿಸುಗುಡುತ್ತಾಳೆ. ಜಾಂಚ್ ಸಮಿತಿಯ (ಶೋಧನಾ ಸಮಿತಿ) ಸದಸ್ಯಳಾಗಿರುವ ಸೋನಾದೇವಿ (45) ಆ ಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಡಿಸುವ ಮಧ್ಯಾಹ್ನದ ಬಿಸಿಯೂಟದಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ಮಧ್ಯಾಹ್ನದ ಬಿಸಿಯೂಟಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಬಡಿಸುವಊಟದ ವಿಚಾರಕ್ಕೆಬಂದರೆಗುಣಮಟ್ಟದೊಂದಿಗೆರಾಜಿಯಾಗುವ ಮಾತೇಇಲ್ಲಎಂದುಖಡಾಖಂಡಿತವಾಗಿ ನುಡಿಯುತ್ತಾರೆ ಸೋನಾದೇವಿ.ಸೀರೆಯ ಸೆರಗಿನಲ್ಲಿತಲೆ ಮುಚ್ಚಿಕೊಳ್ಳುವ ಸಂಕೋಚದ ಮುದ್ದೆಯಂತಿರುವ ಸೋನಾದೇವಿ ಇಂತಹ ವಿಚಾರದಲ್ಲಿ ಮಾತ್ರ ಹುಲಿಯಂತೆ ನಿರ್ಭೀತರಾಗಿಗದ್ದರಿಸುತ್ತಾರೆ. “ಅರೆ ನಮ್ಮ ಮಕ್ಕಳಿಗೆಒಳ್ಳೆಯಆಹಾರಕೊಡ್ಬೇಕು, ಮತ್ತೆಅದುಅವರ ಹಕ್ಕು” [...]

 
Posted in Current Edition Article, Features, Livelihood, Prayas in Kannada, Social Assistance | Tagged , , , , , , | Leave a comment

ಇನ್ಫೋಗ್ರಾಫಿಕ್: ಭಾರತದಲ್ಲಿ ಸಾವಯವ ಕೃಷಿಯ ಒಂದು ಮುನ್ನೋಟ (Organic agriculture in India – an overview)

OrganicInfographic_1

ಭಾರತದಲ್ಲಿ ಸುಮಾರು ಶೇ 74ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು. ಅವರಿಗೆ ಸಾವಯವ ಕೃಷಿ ಸೂಕ್ತ ವಿಧಾನ. ಒಂದಷ್ಟು ಹೊಲವನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಅದನ್ನು ಸಂಪೂರ್ಣವಾಗಿ ಬಳಸುವುದು ಇದರ ಮುಖ್ಯ ಉದ್ದೇಶ. ಆದಷ್ಟು ಪೋಷಕಾಂಶಯುಕ್ತ, ಆರೋಗ್ಯಕರ ಆಹಾರ ಉತ್ಪಾದನೆ ಮಾಡುವುದು ಹಾಗೂ ಜೀವನಕ್ಕೆ ಬೇಕಾದ ಇತರ ಉತ್ಪನ್ನಗಳತ್ತಲೂ ಗಮನ ಹರಿಸುವುದು ಸಾಧ್ಯ. ಈ ಶೈಲಿ ಸಣ್ಣ ಕುಟುಂಬವನ್ನು ಸ್ವಾವಲಂಬಿಗೊಳಿಸಬಲ್ಲುದು. ಮಣ್ಣಿನ ಆರೋಗ್ಯ ರಕ್ಷಿಸಬಹುದು. ಸಾವಯವ ಮಾದರಿಯಲ್ಲಿ ಉತ್ಪಾದನೆ ಮಾಡುವುದರಿಂದ ಮಣ್ಣಿನ ಉತ್ಪಾದನಾ ಸಾಮಥ್ರ್ಯವನ್ನು [...]

 
Posted in Current Edition Article, Infographic, Infographics, Livelihood, Prayas in Kannada | Tagged , , | Leave a comment

ಮೌನ ಮಾತನಾಡಿದಾಗ… (When silence becomes audible)

1400_normal_WomensVoices_yug

ಆವಾಜ್-ಎ-ನಿಸ್ವಾನ್‍ನಂತಹ ಸಂಸ್ಥೆಗಳು ತಲೆತಲಾಂತರಗಳಿಂದ ಸಂಕೋಲೆಗೊಳಗಾಗಿದ್ದ ಮಹಿಳೆಯರು ನಿಧಾನವಾಗಿ ಆ ಸಾಮಾಜಿಕ ಶ್ರೇಣಿಯನ್ನು ಮುರಿದು ಮುಕ್ತರಾಗಲು ಸಹಾಯ ಮಾಡುತ್ತಿವೆ… ಭಾರತದಂತÀಹ ವಿಸ್ತಾರ ಮತ್ತು ವೈವಿಧ್ಯಮಯ ಪ್ರಜಾಪ್ರಭುತ್ವದಲ್ಲಿ ಹತ್ತು ಹಲವು ಬಗೆಯ ಸಂಸ್ಕøತಿ ಮತ್ತು ಜನರ ನಡುವಣ ವೈಷಮ್ಯಗಳೇ ಜಗತ್ತಿನ ಬೇರೆ ಮೂಲೆಗಳಲ್ಲಿ ಪ್ರತಿಧ್ವನಿಸುತ್ತಿರುವಾಗ, ಮೌನವನ್ನು ಆಲಿಸುವವರಾರು?ಇಷ್ಟಾಗಿ ಅದೊಂದು ಸಮಸ್ಯೆಯೇ ಅಲ್ಲ ಎಂಬಂತೆ ನಮ್ಮ ಸ್ಥಿತಿಗತಿ ಇದೆ.ಅಲ್ಲದೆ ಕೋಟ್ಯಂತರ ಗಿಜಿಗುಟ್ಟುವ ಧ್ವನಿಗಳನ್ನು ಹೊಂದಿದ ದೇಶದಲ್ಲಿ ಯಾರ ಧ್ವನಿಯನ್ನು ಆಲಿಸುವುದು?ಸಾವಿರಾರು ಮಹಿಳೆಯರು ತಮ್ಮನ್ನು ಬಂಧಿಸಿರುವ ಸಾಮಾಜಿಕ ಸಂಕೋಲೆಯ ಒಳಗೇ ಹೇಗೋ ಬದುಕುವುದು [...]

 
Posted in Current Edition Article, Featured, Features, Prayas in Kannada, Social Assistance | Tagged , , | Leave a comment

ಡೆಕ್ಕನ್‍ಡೆವಲಪ್‍ಮೆಂಟ್ ಸೊಸೈಟಿ: ಮಹಿಳಾ ಸಬಲೀಕರಣದ ಹತ್ತು ಹಲವು ನವಮುಖಗಳು… (DDS: Sanghams that empower)

ಪಸ್ತಾಪುರವು ಸಂಘಂ ಪರಿಕಲ್ಪನೆಯು ಹೇಗೆ ಬದಲಾವಣೆಗೆ ಪ್ರೇರಕವಾಗಿದೆಎಂಬುದರಒಂದುಅತ್ಯುತ್ತಮಉದಾಹರಣೆಯಾಗಿದೆ. ಇವರು45ರ ನಡುವಯಸ್ಸಿನಲ್ಲಿರೇಡಿಯೋಜಾಕಿಯಾದವರು.ಅನಕ್ಷರಸ್ಥದಲಿತ ಮಹಿಳೆಯೊಬ್ಬರುಅತ್ಯಾಧುನಿಕಕೆಮೆರಾ ಹಿಡಿದು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಾರೆ.ಒಮ್ಮೆ ಭೂರಹಿತ ಮಹಿಳೆಯಾಗಿದ್ದವರುಇಂದು 20 ಎಕರೆಜಮೀನಿನ ಒಡತಿಯಾಗಿದ್ದಾರೆ.ಅಂದಹಾಗೆಇವ್ಯಾವುವೂಕಟ್ಟುಕಥೆಗಳಲ್ಲ. ಇವುಕಳೆದ 25 ವರ್ಷಗಳಲ್ಲಿ 75 ಹಳ್ಳಿಗಳಸುಮಾರು5000 ಅಂಚಿಗೆ ಸರಿದ ಮಹಿಳೆಯರು ಬದಲಾವಣೆಯ ಹರಿಕಾರರಾಗಿ ಹೊರಹೊಮ್ಮಿದ್ದಾರೆಎನ್ನುವುದರ ನಿದರ್ಶನಗಳು.ಆಂಧ್ರದಗಡಿಭಾಗದಲ್ಲಿಒಳಾಂತರ ಪ್ರದೇಶದಲ್ಲಿರುವ ಪಾಸ್ತಾಪುರಗ್ರಾಮವು ಸ್ವ-ಆಡಳಿತೆ ಮತ್ತು ಸ್ವ-ಸುಸ್ಥಿರತೆಯು ಹೇಗೆಕಡುಬಡವರ ಬೊಗಸೆಯಲ್ಲಿಯೇಅಡಗಿದೆಎಂಬುದಕ್ಕೆಒಂದುಜ್ವಲಂತಉದಾಹರಣೆಯಾಗಿದೆ. ಡೆಕ್ಕನ್‍ಡೆವಲಪ್‍ಮೆಂಟ್ ಸೊಸೈಟಿ(ಡಿಡಿಎಸ್) ಅಂತರ್ಜಾಲತಾಣದಲ್ಲಿ ವಿವರಿಸಿದಂತೆ, “ಡಿಡಿಎಸ್‍ಕಳೆದೆರಡುದಶಕಗಳಿಂದಆಂಧ್ರ ಪ್ರದೇಶದ ಸುಮಾರು 75 ಹಳ್ಳಿಗಳಲ್ಲಿ ಮಹಿಳೆಯರ ಸಂಘಂಗಳೊಂದಿಗೆ (ಆರ್ಥಿಕದುರ್ಬಲವರ್ಗದ ಮಹಿಳೆಯರಗ್ರಾಮಹಂತದ ಸಂಘಗಳು) ತಳಹಂತದಲ್ಲಿತೊಡಗಿಸಿಕೊಂಡುಕೆಲಸ ಮಾಡುತ್ತಿರುವ ಸಂಸ್ಥೆ”. ಸಂಸ್ಥೆಯ 5000 [...]

 
Posted in Current Edition Article, Features, Ground Reality, Prayas in Kannada | Tagged , , , , | Leave a comment

ಆಂಧ್ರಪ್ರದೇಶ: ಸ್ವಸಹಾಯ ಗುಂಪುಗಳ ಮೂಲಕ ಸಾವಯವ ಆಂದೋಲನದ ಮುಂಚೂಣಿಯಲ್ಲಿ (Andhra Pradesh: Spearheading the organic movement through SHGs)

Pers_Agarwal_Figure3

- ಪ್ರೀತಿ ನಾಗರಾಜ್ ಆಕೆ ಕೂಡ ಆಗತಾನೇ ಮದುವೆಯಾದ ಕನಸುಕಂಗಳ ಹದಿಹರೆಯದ ಯವತಿಯರಂತೆ ಇರಬಹುದಾಗಿತ್ತು. ಆದರೆ ಸವಿತಾಳಿಗೆ ಮುಂದೇನು ಎಂಬುದು ಸ್ಪಷ್ಟವಾಗಿ ತಿಳಿದಿತ್ತು. ಅದಕ್ಕಾಗಿ ಆಕೆ ಮೊದಲು ತನ್ನ ಗಂಡನ ವಿಶ್ವಾಸ ಗೆದ್ದುಕೊಂಡಳು. ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ತನ್ನ ಗಂಡನೊಂದಿಗೆ ಒಂದು ಅಪೂರ್ವವೆನಿಸಿದ ಗುತ್ತಿಗೆ ಕರಾರು ಸಿದ್ಧಪಡಿಸಿದಳು. ಅವರಿಬ್ಬರೂ ಕಾಲು ಎಕರೆ ಭೂಮಿಯನ್ನು ಲೀಸ್‍ಗೆ ಪಡೆದುಕೊಂಡು ಅದನ್ನು ಎರಡು ಭಾಗವಾಗಿ ಮಾಡಿಕೊಂಡಳು, ಒಂದು ಭಾಗ ತನಗೆ, ಒಂದು ತನ್ನ ಗಂಡನಿಗೆ. ಅಲ್ಲಿ ತಮಗೆ ತಿಳಿದಂತೆ ಕೃಷಿ ಮಾಡಲಾರಂಭಿಸಿದರು. [...]

 
Posted in Current Edition Article, Featured, Features, Livelihood, Prayas in Kannada | Tagged , , , , | Leave a comment

‘1. ಪುಷ್ಟಿಕರ ಆಹಾರ- ರೈತರು ಮತ್ತು ಜೀವನಾಧಾರಗಳು, ಆಹಾರ ಭದ್ರತೆ ಮತ್ತು ಸಬಲೀಕರಣ (Sustainable agriculture and food security)

Small farmers

ಸಂಪಾದಕರ ಟಿಪ್ಪಣಿ: ಜಗತ್ತಿಗೆ ಉಣಿಸಲು ಸಾಕಾಗುವಷ್ಟು ಆಹಾರದ ಉತ್ಪಾದನೆಯಾಗುತ್ತಿದ್ದರೂ ಜಗತ್ತಿನಾದ್ಯಂತ 850 ದಶಲಕ್ಷಕ್ಕೂ ಹೆಚ್ಚು ಜನ ದಿನಕ್ಕೆ ಒಂದು ಹೊತ್ತೂ ಹೊಟ್ಟೆತುಂಬ ಆಹಾರವಿಲ್ಲದೆ ಬದುಕುತ್ತಿದ್ದಾರೆ. ಪ್ರತಿವರ್ಷ, ಲವಣೀಕರಣ ಮತ್ತು ಕೈಗಾರಿಕೀಕರಣದಿಂದಾಗಿ 200 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿ ನಷ್ಟವಾಗುತ್ತಿದೆ. ಜತೆಗೆ ಸಾವಯವ ಕೃಷಿಯಂತಹ ನೈಸರ್ಗಿಕ ಕೃಷಿ ವಿಧಾನಗಳ ಬಳಕೆ ಮತ್ತು ರೈತರ ಸಬಲೀಕರಣ ಹಾಗೂ ಬೀಜದ ಉಳಿತಾಯದಂತಹ ಆಹಾರ ಭದ್ರತೆಯ ಕಾರ್ಯಕ್ರಮಗಳೂ ಹೆಚ್ಚುತ್ತಿವೆ. ಪುಷ್ಟಿಕರ ಆಹಾರ ಸರಣಿಯಲ್ಲಿ, ನಾವು ಸಾವಯವ ಕೃಷಿಕರು, ಸರಕಾರಿ ಅಧಿಕಾರಿಗಳು ಮತ್ತು ರೈತರು [...]

 
Posted in Current Edition Article, Editorial, Featured, Ground Reality, Livelihood, Prayas in Kannada, Views | Tagged , , , , | Leave a comment

ರೈತ ಮತ್ತು ಆಹಾರ (The farmer and the food)

Kamalamma showing the finger millet variety

ಪ್ರಯಾಸ್ ಹತ್ತು ವರ್ಷಗಳ ಹಿಂದೆ ಆರಂಭವಾದ ರೈತರ ಗುಂಪೊಂದು ಇಂದು ಕೃಷಿಗೆ ಸಂಬಂಧಿಸಿದಂತೆ ದೇಶದ ಬಹುಮುಖ್ಯ ಧ್ವನಿಗಳಲ್ಲಿ ಒಂದಾಗಿದೆ. ಬೆಳೆಗಾರರ ಕ್ರಾಂತಿಕಾರಿ ಸಂಘಟನೆ ಅದು. ಪುಸ್ತಕಗಳನ್ನು ಪ್ರಕಟಿಸುವುದು, ಸಾವಯವ ಕೃಷಿಗೆ ತರಬೇತಿ ನೀಡುವುದು, ಹೊಸ ತಳಿಯ ಭತ್ತವನ್ನು ಉತ್ಪಾದಿಸುವುದು… ಈ ಸಂಘಟನೆಯ ಪ್ರಮುಖ ಕ್ರಾಂತಿಗಳು. ಸಹಜ ಸಮೃದ್ಧ ಎನ್ನುವುದು ರೈತರ ಸುಧಾರಣೆಗಾಗಿ ರೂಪುಗೊಂಡಿರುವ ಸಂಘಟನೆ.   ಈ ಅಭಿಯಾನ ಆರಂಭವಾದ ದಿನಗಳ ಬಗ್ಗೆ ವಿವರಿಸುತ್ತೀರಾ? ಕೃಷ್ಣ ಪ್ರಸಾದ್: ನಾನು ಉತ್ತರಕರ್ನಾಟಕದ ರೈತ ಕುಟುಂಬದಿಂದ ಬಂದವನು. ನನ್ನ ಅಮ್ಮ [...]

 
Posted in Current Edition Article, Featured, Interviews, Livelihood, Prayas in Kannada | Tagged , , , , , | Leave a comment