Signs of Light
ತಿಂಬಕ್ತು ರೈತರ ಬಾಳಿನಲ್ಲಿ ಬಂದ ಬದಲಾವಣೆ (The Future Local Series: How Timbaktu’s farmers got earth to meet sky)
ಒಂದು ಕಾಲದಲ್ಲಿ ಬಿರುಕುಬಿಟ್ಟ ಹೊಲ ಗದ್ದೆಗಳು, ಒಣಗಿದ ಪೈರು, ಬಾರದ ಮಳೆ, ಸಾಲಗಾರ ರೈತರು ಮುಂತಾದ ಸಮಸ್ಯೆಗಳಿಂದ ತುಂಬಿ ಹೋಗಿದ್ದ ಜಿಲ್ಲೆಯದು. ಆದರೆ ಈಗದು ಫಲವತ್ತಾದ ಭೂಮಿಯಾಗಿದೆ. ಉತ್ತಮ ಪೈರು ತೊನೆದಾಡುತ್ತಿದೆ. ಅಲ್ಲಿರುವ ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಅವರೆಲ್ಲರೂ ಮೊರೆ ಹೋಗಿದ್ದು ಸಾವಯವ ಕೃಷಿಗೆ. ತಿಂಬಕ್ತು ಕಲೆಕ್ಟಿವ್‍ನ ಕಥೆ ಇದು. ಭೂಮಿಯನ್ನು ಮರಳಿ ಪಡೆದ, ಆ ಭೂಮಿಯಿಂದ ಫಲವನ್ನು ಪಡೆದು ಉಣ್ಣುವ ರೈತರ ಕತೆ ಇದು. ಈ ವರ್ಷದ ಬರಗಾಲ ಅಲ್ಲಿಗೆ ಹೊಸ ಅತಿಥಿಯೇನಲ್ಲ. [...]