Tag Archives: Tobacco Special
ತಾವೇ ತಯಾರಿಸುವ ಗುಟ್ಕಾದ ಚಟ ಹತ್ತಿಸಿಕೊಂಡವರು – They make the gutkha they are addicted to
ಸೋನಾಲ್ ಮಾತರು ಪ್ರತಾಪ್ಗಂಜ್ ಕೈಗಾರಿಕಾ ಪ್ರದೇಶದ 11ನೇ ನಂಬರ್ನ ಪ್ಲಾಟ್ನ ಸುತ್ತಲಿನ ಸ್ಥಳದಲ್ಲಿ ದಟ್ಟವಾದ ವಾಸನೆ. ಕಾರ್ಖಾನೆಯ ಹಿಂಭಾಗದಲ್ಲಿನ ಲಾರಿಗೆ ಶಿಕಾರ್ (ದೆಹಲಿಯ ಅತ್ಯಂತ ಹೆಚ್ಚು ಮಾರಾಟವಾಗುವ ಗುಟ್ಕಾ ಬ್ರಾಂಡ್) ತುಂಬಿದ ಚೀಲಗಳನ್ನು ಹೇರಲಾಗುತ್ತಿದೆ. ಕಬ್ಬಿಣದ ಭಾರಿ ಗೇಟುಗಳು ಮತ್ತು ವಯರ್ಲೆಸ್ ಹಿಡಿದು ಸುತ್ತಾಡುವ ಗಾರ್ಡ್ಗಳು ಒಳಭಾಗಕ್ಕೆ ಯಾರೂ ಪ್ರವೇಶಿಸದಂತೆ ನೋಡಿಕೊಳ್ಳುತ್ತಾರೆ. ಪೂರ್ವ ದೆಹಲಿಯ ಪ್ರತಾಪ್ಗಂಜ್ ಕೈಗಾರಿಕಾ ಪ್ರದೇಶದ ರಸ್ತೆಯ ಇನ್ನೊಂದು ಭಾಗದಲ್ಲಿರುವ ನಸುಗೆಂಪು ಬಣ್ಣದ ನಾಲ್ಕು ಮಹಡಿ ಕಟ್ಟಡದಲ್ಲಿ 200ಕ್ಕೂ ಹೆಚ್ಚು ಕಾರ್ಮಿಕರು ವಾಸಿಸುತ್ತಿದ್ದಾರೆ. ಅವರಲ್ಲಿ [...]